CALL US: ನಮ್ಮನ್ನು ಸಂಪರ್ಕಿಸಿ +91 080 4952 1123
International Shipping Available
Shopping cart ಖರೀದಿ ಗಾಡಿ
{{CART.item_count()}} items ವಸ್ತುಗಳು

About Us - Benefits

Total Karnataka offers benefits to all the stakeholders in different ways. Consumers of products and services are benefitted by going through a single window for all they look for from Karnataka. While there are individual on-line presences by the large producers for their own products, there is no other platform to bring all of them together.  Consumers are benefitted especially through a reach to the specialty products of Karnataka which otherwise they may not be able to possess.

Small, medium and rural producers are benefitted by  an additional channel that will soon become the mainstream for retail.  Cutting the middle men layers and the inventory pile up in the channel, such producers will be able to reach the consumers worldwide.

Associates who will act as aggregators will be benefitted by joining hands and participating in the sourcing and fulfilment process.  Each Associate will act as a friend and guide for the small, rural producers and at the same time a responsible person taking care of packing and despatching logistics to earn the confidence of consumers.

 

ಪ್ರಯೋಜನಗಳು


ಟೋಟಲ್ ಕರ್ನಾಟಕದ ಮೂಲಕ ಎಲ್ಲಾ ಭಾಗಿದಾರರಿಗೂ ಪ್ರಯೋಜನ ದೊರೆಯಲಿದೆ. ಜಾಗತಿಕ ಗ್ರಾಹಕರಿಗೆ ಕರ್ನಾಟಕದ ಉತ್ಪನ್ನಗಳೆಲ್ಲವೂ ಒಂದೆಡೆಯೇ ದೊರೆಯುವ ಸೌಲಭ್ಯದ ಪ್ರಯೋಜನವಿದೆ. ದೊಡ್ಡ ಮಾರಾಟ ವ್ಯವಸ್ಥೆ ಹೊಂದಿರುವ, ಬೇರೆ ಬೇರೆ ಉತ್ಪಾದಕರಿಂದ ಅವರದೇ ಆದ ಅಂತರ್ಜಾಲ ಮಳಿಗೆಗಳಿದ್ದರೂ ಸಹ,   ಮತ್ತು ಸಣ್ಣ ಉದ್ದಿಮೆದಾರರ ಉತ್ಪನ್ನಗಳನ್ನೂ ಸೇರಿಸಿ ಎಲ್ಲಾ ಉತ್ಪನ್ನಗಳನ್ನೂ ಒಂದೇಕಡೆ ಕೊಳ್ಳಬಹುದಾದ, ನಂಬಿಕೆಗೆ ಅರ್ಹವಾದ ಮಳಿಗೆಯ ಪ್ರಯೋಜನ ಟೋಟಲ್ ಕರ್ನಾಟಕದ ಮೂಲಕ ದೊರೆಯಲಿದೆ. ಅದಕ್ಕಿಂತ ಹೆಚ್ಚಾಗಿ, ಕರ್ನಾಟಕದ ಚಾಪ ಹೊಂದಿರುವ ವಿಶೇಶ ಉತ್ಪನ್ನಗಳನ್ನು ಅಂತರ್ಜಾಲದ ಮೂಲಕ ಕೊಂಡು ಅನುಭವಿಸುವ ಅವಕಾಶ ಲಭ್ಯವಾಗಲಿದೆ.

 

ಸಣ್ಣ, ಅತಿ ಸಣ್ಣ ಮತ್ತು ಗ್ರಾಮೀಣ ಪ್ರದೇಶದ ಉತ್ಪಾದಕರಿಗೆ, ಈ ವ್ಯವಸ್ಠೆಯಿಂದ, ಮಾರುಕಟ್ಟೆಗೆ ಇನ್ನೊಂದು ರಹದಾರಿ ದೊರೆತಂತಾಗುತ್ತದೆ. ಮದ್ಯವರ್ತಿಗಳ ಪೀಡನೆಯನ್ನು ಮೊಟಕುಗೊಳಿಸಿ, ಬೇರೆ ಬೇರೆ ಹಂತಗಳಲ್ಲಿ ದಾಸ್ತಾನಾಗಿರುವ ಮಾಲುಗಳ ಪ್ರಮಾಣವನ್ನು ಕಡಿಮೆಮಾಡಿ, ಶೀಘ್ರವಾಗಿ ಮತ್ತು ನೇರವಾಗಿ ಗ್ರಾಹಕರನ್ನು ತಲಪುವ ಅವಕಾಶದ ಪ್ರಯೋಜನ ದೊರೆಯಲಿದೆ.

ಪ್ರಾದೇಶಿಕ ವಲಯಗಳಲ್ಲಿ ಹಬ್ಬಿರುವ ಬೇರೆ ಬೇರೆ ಉತ್ಪಾದಕರಿಂದ ಉತ್ಪನ್ನಗಳನ್ನು ಒಂದುಗೂಡಿಸಿ, ಪ್ಯಾಕ್ ಮಾಡಿ, ರವಾನೆ ಮಾಡುವ ಸಹವರ್ತಿಗಳು, ಉತ್ಪಾದಕರ ಮತ್ತು ಗ್ರಾಹಕರ ನಡುವಿನ ಸ್ನೇಹದ ಕೊಂಡಿಯಾಗಿ, ಸೇವೆ ಸಲ್ಲಿಸಲಿದ್ದಾರೆ.